ಚಿತ್ರಗಳನ್ನು ನೋಡಿ, ಸಂತೋಷಪಡಿ, ನಿಮ್ಮವರಿಗೂ ಇದನ್ನು ನೋಡಲು ಹೇಳಿ, ಕಲೆಯನ್ನು ಪ್ರೋತ್ಸಾಹಿಸಿ. ಸಹೃದಯರೇ, ನಾನೊಬ್ಬ ಗ್ರಾಮೀಣ ಹೈಸ್ಕೂಲೊಂದರ ಚಿತ್ರಕಲಾ ಶಿಕ್ಷಕ- ವ್ಯಂಗ್ಯಚಿತ್ರ ರಚನೆ ನನ್ನ ಹವ್ಯಾಸಗಳಲ್ಲೊಂದು. ಲೇಖನಗಳನ್ನೂ ಬರೆಯುತ್ತಿರುತ್ತೇನೆ. ಏನೋ ನನ್ನ ಮನಸ್ಸಿನ ತೃಪ್ತಿಗೋಸ್ಖರ ಆಗಾಗ ಕಿರುಗಾತ್ರದ ಚಿತ್ರಗಳನ್ನು ರಚಿಸುವುದುಂಟು. ಅದನ್ನು ಇತರರೊಡನೆ ಹಂಚಿಕೊಳ್ಳುವ ಬಯಕೆ ಹಾಗಾಗಿ ಈ ಬ್ಲಾಗಿನ ಮೂಲಕ ನಿಮ್ಮೆದುರು ಇಡುತ್ತಿದ್ದೇನೆ. ನನಗೆ ನನ್ನ ಬಳಿ ಕಲಿತ ವಿದ್ಯಾರ್ಥಿಗಳೇ ಈ ಬ್ಲಾಗ ರಚನೆಯ ಗುರುಗಳು. ಸಾರ್ ನಿಮ್ಮದೊಂದು ಬ್ಲಾಗ್ ಮಾಡಿ ಚಿತ್ರ ಹಾಕಿ ಸಾರ್ ಎಂದು ನನ್ನನ್ನು ಮೊದಲು ಹುರಿದುಂಬಿಸಿ ಬ್ಲಾಗ ರಚನೆಯ ರಚನೆಯ ಪಾಠ ಹೇಳಿದವನು ಪಿ. ಟಿ. ಪ್ರಮೋದ. ಬೆಂಗಳೂರಿನಲ್ಲಿ ಎಂಜಿನೀಯರ. ಇವನಂತೆ ನನಗೆ ಹಲವಾರು ವಿದ್ಯಾರ್ಥಿಗಳು ಗುರುವಿನಂತೆ ಸ್ನೇಹಿತರಂತೆ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ನಿಮ್ಮ ಪ್ರೋತ್ಸಾಹವೂ ಇರಲಿ. ನಮಸ್ಕಾರ.
ಎಂದಿನ ಹಾಗೇ ಆದ್ಭುತ ಚಿತ್ರಗಳು ಸರ್,
ReplyDeleteಸುಮಧುರವಾದ ಲಹರಿಯೊಂದು ತೇಲಿಬಂದ ಹಾಗೆ,ಆಗಸದಲ್ಲಿ ಬಣ್ಣಗಳ ಹಿಡಿದು ಹಾರಿದ ಹಾಗೆ, ಸ್ವಪ್ನತೀರದಲ್ಲಿ ಅಲೆದಾಡಿದ ಹಾಗೆ..
ನನ್ನೊಳಗಿನ ಬಣ್ಣಗಳನ್ನು ಉದ್ದೀಪಿಸುತ್ತ,ಬೆನ್ತಟ್ಟಿ ಪೊರೆಯುತ್ತಿರುವ ನಿಮಗೂ ನಿಮ್ಮ ಚಿತ್ರಗಳಿಗೂ ನೂರು ನಮನಗಳು.
ಪ್ರೀತಿಯಿಂದ,
-ವೆಂಕಟ್ರಮಣ ಹೆಗಡೆಪಾಲ್
nice paintings..!!!
ReplyDelete